ಅಲಿ ಅಬ್ಬಾಸ್ ಜಾಫರ್ ರವರು ಭಾರತದ ಚಲನಚಿತ್ರ ನಿರ್ದೇಶಕ ಮತ್ತು ಚಿತ್ರಕಥೆಗಾರ.ಜಾಫರ್ ರವರು ನವದೆಹಲಿಯ ಕಿರೋರಿ ಮಲ್ ಕಾಲೇಜಿನ ಪದವೀಧರರಾಗಿದ್ದಾರೆ.ಅವರು ತಮ್ಮ ಚೊಚ್ಚಲ ರೋಮ್ಯಾಂಟಿಕ್ ಹಾಸ್ಯಮಯ ಚಿತ್ರ, 'ಮೇರೆ ಬ್ರದರ್ ಕಿ ದುಲ್ಹನ್'(೨೦೧೧)ಗಾಗಿ ಮಧ್ಯಮ ಯಶಸ್ಸನ್ನು ಗಳಿಸಿದರು.ನಂತರ ಅವರು ಸಾಹಸಮಯ ಚಲನಚಿತ್ರ 'ಗುಂಡೇ'(೨೦೧೪)ಗೆ ನಿರ್ದೇಶನ ಮಾಡಿದರು.ಕ್ರೀಡಾ ಚಲನಚಿತ್ರ 'ಸುಲ್ತಾನ್'(೨೦೧೬)ಗಾಗಿ ಅವರು ವ್ಯಾಪಕವಾದ ಗುರುತನ್ನು ಪಡೆದರು.ಇದು ಅತೀ ಹೆಚ್ಚು ಗಳಿಕೆಯ ಭಾರತೀಯ ಚಲನಚಿತ್ರಗಳಲ್ಲಿ ಒಂದಾಗಿದೆ.ನಂತರ ಅವರು ಆಕ್ಷನ್ ಥ್ರಿಲ್ಲರ್ 'ಟೈಗರ್ ಝಿಂದಾ ಹೇ'(೨೦೧೭)ಗೆ ನಿರ್ದೇಶನ ಮಾಡಿ ದೊಡ್ಡ ಯಶಸ್ಸನ್ನು ಸಾಧಿಸಿದರು. == ವೃತ್ತಿ ಜೀವನ == ಅಲಿ ಅಬ್ಬಾಸ್ ಜಾಫರ್ ರವರು ಆರಂಭದಲ್ಲಿ ಯಶ್ ರಾಜ್ ಫಿಲ್ಮ್ಸ್ (ವೈ.ಆರ್.ಎಫ್)ಗಾಗಿ ಅನೇಕ ಯೋಜನೆಗಳೊಂದಿಗೆ ಸಹಾಯಕ ನಿರ್ದೇಶಕರಾಗಿ ಚಿತ್ರರಂಗಕ್ಕೆ ಪ್ರವೇಶಿಸಿದರು.ನಂತರ ಅವರು ತಮ್ಮದೇ ನಿರ್ದೇಶನದ 'ಮೇರೆ ಬ್ರದರ್ ಕಿ ದುಲ್ಹನ್' ಚಿತ್ರದೊಂದಿಗೆ, ನಿರ್ದೇಶಕರಾಗಿ ಚೊಚ್ಚಲ ಪ್ರವೇಶ ಮಾಡಿ, ಗುರುತಿಸಲ್ಪಟ್ಟರು.ಈ ಚಿತ್ರದಲ್ಲಿ ಇಮ್ರಾನ್ ಖಾನ್ ಮತ್ತು ಕಟ್ರೀನಾ ಕೈಫ್ ಪ್ರಮುಖ ಪಾತ್ರಧಾರಿಗಳಾಗಿ ಕಾಣಿಸಿಕೊಂಡರು.ಅವರ ಮುಂದಿನ ಚಲನಚಿತ್ರವು ೧೯೭೦ ಮತ್ತು ೧೯೮೦ ರ ದಶಕದಲ್ಲಿ ಕಲ್ಕತ್ತಾದಲ್ಲಿ ನಡೆದ ಆಕ್ಷನ್ ಚಿತ್ರ 'ಗುಂಡೇ'(೨೦೧೪) ಆಗಿತ್ತು.ಈ ಚಿತ್ರದಲ್ಲಿ ರಣವೀರ್ ಸಿಂಗ್, ಅರ್ಜುನ್ ಕಪೂರ್ ಮತ್ತು ಪ್ರಿಯಾಂಕಾ ಚೋಪ್ರಾ ರವರು ಪ್ರಮುಖ ಪಾತ್ರಧಾರಿಗಳಾಗಿ ಅಭಿನಯಿಸಿದ್ದಾರೆ.ಈ ಚಿತ್ರವು ವಿಮರ್ಶಕರಿಂದ ಹೆಚ್ಚು ಸಕಾರಾತ್ಮಕ ವಿಮರ್ಶೆಗಳನ್ನು ಪಡೆಯಿತು.ಜಾಫರ್ ರವರ ಮುಂದಿನ ಚಿತ್ರವು ಸಲ್ಮಾನ್ ಖಾನ್ ನಟಿಸಿದ ಬ್ಲಾಕ್ಬಸ್ಟರ್ ಕ್ರೀಡಾ ಚಲನಚಿತ್ರ 'ಸುಲ್ತಾನ್'.ಇದರಲ್ಲಿ ಸಲ್ಮಾನ್ ಖಾನ್ ರವರು ಹರಿಯಾಣದ ಕುಸ್ತಿ ಚಾಂಪಿಯನ್ ಆಗಿ ಹಾಗು ಅನುಷ್ಕಾ ಶರ್ಮಾ ರವರು ಸ್ತ್ರೀ ಕುಸ್ತಿಪಟುವಾಗಿ ಕಾಣಿಸಿಕೊಂಡಿದ್ದಾರೆ.ಈ ಚಿತ್ರವೂ ಸಕಾರಾತ್ಮಕ ವಿಮರ್ಶೆಗಳನ್ನು ಪಡೆದುಕೊಂಡಿದೆ.ಜಾಫರ್ ರವರು ೨೦೧೭ ರಲ್ಲಿ, 'ಟೈಗರ್ ಝಿಂದಾ ಹೇ' ಚಿತ್ರವನ್ನು ನಿರ್ದೇಶಿಸಿದರು.ಇದು ಆಕ್ಷನ್ ಥ್ರಿಲ್ಲರ್ ಚಿತ್ರವಾಗಿದ್ದು, ಇದರಲ್ಲಿ ಸಲ್ಮಾನ್ ಖಾನ್ ರವರು ರಾ ಏಜೆಂಟ್ ಆಗಿ, ಕಟ್ರೀನಾ ಕೈಫ್ ರವರು ಐಎಸ್ಐ ಪತ್ತೇದಾರಿಯಾಗಿ ಪಾತ್ರವನ್ನು ನಿರ್ವಹಿಸಿದ್ದಾರೆ.ಈ ಚಿತ್ರವು ೪೦ ದಾದಿಯರು, ೨೫ ಭಾರತೀಯರು ಮತ್ತು ೧೫ ಪಾಕಿಸ್ತಾನಿಯರನ್ನು ನಿರ್ದಯವಾದ ಉಗ್ರಗಾಮಿಗಳಿಂದ ಮುಕ್ತಗೊಳಿಸಲು ಒಂದು ಪಾರುಗಾಣಿಕಾ ಕಾರ್ಯಾಚರಣೆಯನ್ನು ಸ್ವೀಕರಿಸುವ ಕತೆಯನ್ನೊಳಗೊಂಡಿದೆ.ಈ ಚಿತ್ರವು ೨೦೧೭ ರ ಡಿಸೆಂಬರ್ ನಲ್ಲಿ ಬಿಡುಗಡೆಯಾಯಿತು.ಮೇ ೨೦೧೮ ರಲ್ಲಿ ಅವರು 'ಭಾರತ್' ಚಿತ್ರದ ಪೂರ್ವ ನಿರ್ಮಾಣವನ್ನು ಪ್ರಾರಂಭಿಸಿದರು.ಈ ಚಿತ್ರದ ಟ್ರೈಲರ್ ೨೨ ಏಪ್ರಿಲ್ ೨೦೧೯ ರಂದು ಬಿಡುಗಡೆಯಾಯಿತು.ಈ ಚಿತ್ರದಲ್ಲಿ ಸಲ್ಮಾನ್ ಖಾನ್, ಕಟ್ರೀನಾ ಕೈಫ್, ದಿಶಾ ಪಟಾನಿ, ಸುನೀಲ್ ಗ್ರೋವರ್, ತಬು(ನಟಿ) ಮುಂತಾದವರು ನಟಿಸಿದ್ದಾರೆ.ಈ ಚಿತ್ರವು 'ಓಡ್ ಟು ಮೈ ಫಾದರ್' ಎಂಬ ಕೊರಿಯನ್ ಚಿತ್ರದ ಅಧಿಕೃತ ರೂಪಾಂತರವಾಗಿದೆ.ಇದು ಖಾನ್ ಮತ್ತು ಅಲಿ ನಡುವಿನ ಮೂರನೇ ಸಹಯೋಗವನ್ನು ಗುರುತಿಸುತ್ತದೆ. == ಚಲನಚಿತ್ರಗಳ ಪಟ್ಟಿ == === ಚಲನಚಿತ್ರಗಳು === == ಪ್ರಶಸ್ತಿಗಳು ಮತ್ತು ನಾಮನಿರ್ದೇಶನಗಳು == == ಉಲ್ಲೇಖಗಳು ==